ತುಂಬಾ ಏಡುಗಳಿಂದಲೂ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯು ನಡೆದುಕೊಂಡೆ ಬಂದಿದೆ. ಅದರಲ್ಲಿ ಕರ್ನಾಟಕದಲ್ಲಿ ಕಲಿಕೆಯಲ್ಲೂ ಹಿಂದಿಯನ್ನು ತಂದು ಮಕ್ಕಳಿಗೆ ಹೆಚ್ಚಿನ ಹೊರೆಯನ್ನು ಹೊರಿಸಲಾಗಿದೆ. ಆದರೆ ಕನ್ನಡಿಗರೇನೂ ಸುಮ್ಮನೆ ಕುಳಿತಿಲ್ಲ. ಅಂದಿನಿಂದಲೂ ಕಲಿಕೆಯಲ್ಲಿ ಮೂರ್ನುಡಿ ಕಲಿಕೆಯನ್ನು ತೊಲಗಿಸಿ, ಎರಡೇ ನುಡಿ ಕಲಿಕೆಯನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ಆಡಳಿತದ ಎದಿರು ಇಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಯಾವುದೇ ನಾಡಾಳಿತವೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಕನ್ನಡಿಗರ ಎದಿರಿಕೆಯು ನಾಳಿಂದ ನಾಳಿಗೆ ಹೆಚ್ಕುತ್ತಲೇ ಹೋಗಿದೆ. ಮೂರ್ನುಡಿ ಕಲಿಕೆಬೇಡವೆಂದು ೫೦,೦೦೦ ಮಂದಿ ಒಪ್ಪ ಹಾಕಿದರು. ಕಲಿಕೆಯಲ್ಲಿ ಮೂರು ನುಡಿ ಬೇಡವೇ ಬೇಡವೆಂದು...